ಪೋಸ್ಟ್‌ಗಳು

ಶಿಕ್ಷಣ ಅವಶ್ಯಕ ಸೇವೆ ಅಲ್ಲವೇ ?

 ಶಿಕ್ಷಣ ಅವಶ್ಯಕ ಸೇವೆ ಅಲ್ಲವೇ ?  ಇತ್ತೀಚೆಗೆ ಸರ್ಕಾರಿ ನೌಕರರೆಲ್ಲಾ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ಹೂಡಿದರು. ಆಗ ಆರೋಗ್ಯ ಮತ್ತು ಸಾರಿಗೆ ಸೇವೆಗಳನ್ನು ಅತೀ ಅವಶ್ಯಕ ಎಂದು ಪರಿಗಣಿಸಲಾಯಿತು. ಆದರೆ ಶಿಕ್ಷಣ ?? ಪಸ್ತುತ ಶಿಕ್ಷಣ ಅವಶ್ಯಕ ಸೇವೆಯಾಗು ಪರಿಗಣನೆಯಾಗಿಲ್ಲದಿರುವುದು ದುರದೃಷ್ಟಕರವಾದುದು.   ಅಷ್ಟಕೂ ಶಿಕ್ಷಣವನ್ನು ಯಾಕೆ ಅತ್ಯಗತ್ಯ ಸೇವೆ ಅಂತ ಪರಿಗಣಿಸಬೇಕು ?  ಶಿಕ್ಷಣ ಏಕೆ ಬೇಕು ಅಂತ  ಯಾವುದೇ ವ್ಯೆಕ್ತಿಗೆ ಕೇಳಿದರೆ,  ಶಿಕ್ಷಣ ಬದುಕು ಕಟ್ಟಿಕೊಳ್ಳಲು , ತನ್ನ ಹಕ್ಕುಗಳನ್ನು ತಿಳಿಯಲು, ವ್ಯವಸ್ಥಿತ ಜೀವನ ನಡೆಸಲು, ಸರಿ ತಪ್ಪುಗಳನ್ನು ವಿಶ್ಲೇಷಿಸಲು, ವೃತ್ತಿ ಪಡೆದುಕೊಳ್ಳಲು, ಹಣ ಅಂತಸ್ತು ಮಾಡಿಕೊಳ್ಳಲು ಇತ್ಯಾದಿ... ಹೀಗೆ ಪ್ರತಿಯೊಬ್ಬರು ಶಿಕ್ಷಣದ ಅವಶ್ಯಕತೆಯನ್ನು ತಮ್ಮ ವೈಯುಕ್ತಿಕ ಚೌಕಟ್ಟಿನಲ್ಲಿ ವಿವರಿಸುತ್ತಾ ಹೋಗುತ್ತಾರೆ.  ಆದರೆ ಸಮಾಜದ ಒಳಿತಿಗಾಗಿ ಶಿಕ್ಷಣದ ಅವಶ್ಯಕತೆ ಏನು, ಒಂದು ದೇಶದ ಪ್ರಗತಿಯಲ್ಲಿ ಶಿಕ್ಷಣದ ಅವಶ್ಯಕತೆ ಏನು ಎಂಬುದರ ಬಗ್ಗೆ ವಿಶ್ಲೇಷಣೆಯಾಗುವುದಿಲ್ಲ. ಇದರಿಂದಾಗಿಯೇ ಶಿಕ್ಷಣ ಅತ್ಯವಶ್ಯಕ ಸೇವೆಯಾಗಿ ಪರಿಗಣನೆಯಾಗಿಲ್ಲ.   ಸಾಮಾಜಿಕ ನ್ಯಾಯಕ್ಕಾಗಿ, ತಳ ಸಮುದಾಯಗಳ ಆರ್ಥಿಕ/ಸಾಮಾಜಿಕ ಅಭಿವೃದ್ದಿಗಾಗಿ, ಶಾಂತಿಯುತ ಸಮಾಜಕ್ಕಾಗಿ, ಪ್ರಜಾಪ್ರಭುತ್ವ ರಕ್ಷಣೆಗಾಗಿ, ಜಾತ್ಯಾತೀತವಾದ ಜೀವನಕ್ಕಾಗಿ ಶಿಕ್ಷಣದ ಅವಶ್ಯಕತೆ ಮುಖ್ಯವಾಗಿದೆ.  ಒಟ್ಟಿನಲ್ಲಿ ಸಾಮಾಜಿಕ ಬದಲಾವಣೆಗಾಗಿ (Social Chang

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ಇಮೇಜ್
  ನಮಸ್ಕಾರ ಸ್ನೇಹಿತರೇ, ಈ ನೆನಪುಗಳೇ ಹಾಗೆ ಅಲ್ವಾ, ಸದಾ ಕಾಡುತ್ತವೆ, ಅಳಿಸುತ್ತವೆ, ನಗಿಸುತ್ತವೆ ಒಳಗೊಳಗೆ ಒಂಥರಾ ಖುಷಿ ನೀಡುತ್ತವೆ. ಇಂಥ ಎಲ್ಲಾ ಭಾವನೆಗಳನ್ನು ಒಮ್ಮೆಲೆ ಅನುಭವಿಸಿದ್ದು ನಮ್ಮ ಕೂಟಗಲ್‌ ನ ಪಂಡಿತ್‌ ನೆಹರೂ ಪ್ರೌಡಶಾಲೆಯ ಗುರುಗಳ ಗುರುವಂದನಾ ಕಾರ್ಯಕ್ರಮದಲ್ಲಿ. ನಮ್ಮ ಬ್ಯಾಚ್‌ ಅಂದರೆ ೧೯೯೯ ರ ಎಸ್‌ ಎಸ್ ಎಲ್‌ ಸಿ ಬ್ಯಾಚ್‌ ಗೆ ೨೫ ವರ್ಷ ತುಂಬಿತು. ಕಾಕತಾಳಿಯಾವೆಂಬಂತೆ ಈ ವರ್ಷವೇ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿಗಳ ತಂಡ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಬಗ್ಗೆ ಗೊತ್ತಾದಾಗಲೇ ಮನಸ್ಸು  ಆ ದಿನಗಳ ನೆನಪುಗಳಿಗೆ ಜಾರಿಹೋಗಿತ್ತು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಮಿಸ್‌ ಮಾಡಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ. ದಶಕಗಳ ನಂತರ ಆ ಶಾಲಾ ಕಟ್ಟಡದ ಆವರಣಕ್ಕೆ ಕಾಲಿಟ್ಟ ತಕ್ಷಣ ಮೈ ರೋಮಾಂಚನವಾಯಿತು. ೨೫ ವರ್ಷಗಳ ನೆನಪು ಒಮ್ಮೆಲೆ ಮೂಡಿಬಂತು. ಈ ಶಾಲೆ ಬಿಟ್ಟು ಹೋದ ಮೇಲೆ ಪಿಯು ಕಾಲೇಜು, ಡಿಗ್ರಿ ಕಾಲೇಜು, ಯೂನಿವರ್ಸಿಟಿಗಳಲೆಲ್ಲಾ ಕಲಿತ ನಮಗೆ ಅಲ್ಲಿನ ಯಾವುದೂ ನೆನಪಿಲ್ಲ, ಆದರೆ ೨೫ ವರ್ಷಗಳ ಹಿಂದೆ ಕಲಿತ ಈ ಶಾಲೆಯಲ್ಲಿ ಒಂದೊಂದು ಜಾಗದ ನೆನಪೂ ಒಂದೂಂದು ಘಟನೆಗಳೂ ಸಹ ಇನ್ನು ಮನಸ್ಸಿನಾಳದಲ್ಲಿ ಹಾಗೆಯೇ ಇದ್ದವು. ಈದಿನ ಅವುಗಳೆಲ್ಲಾ ಹಾಗೇ ಜಾರಿಬಂದವು. ಒಬ್ಬೊಬ್ಬರಾಗಿಯೇ ಹಳೇ ಸ್ನೇಹಿತರು ಜೊತೆ ಸೇರಿದರು, ಅವರ ಕಣ್ಣುಗಳಲ್ಲಿಯೂ ಸಹ ಆ ಅತೀವ ಆನಂದದ ಭಾವನೆಯನ್ನು ಕಾಣಬಹುದಾಗಿತ್ತು. ಎಲ್ಲರ

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು

ಇಮೇಜ್
ವಿದ್ಯಾಗಮ ಕಾರ್ಯಕ್ರಮ ನಿಲ್ಲಲು ಕಾರಣಗಳು ಹಾಗು ಅದರ ಹಿಂದಿರುವ ಕೈಗಳು ಯಾವುವು ಗೊತ್ತಾ... ಮುಂಬರುವ ಎಂ.ಎಲ್.ಸಿ ಎಲೆಕ್ಷನ್ ಲಿ‌ ಕ್ಯಾಂಪೇನ್ ಮಾಡೋಕೆ‌ ಶಿಕ್ಷಕರು ಬೇಕಿತ್ತು, ಒಳ್ಳೆ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಗಳ ದಾಖಲಾತಿ‌ ಹೆಚ್ಚಾಗ್ತ ಇದ್ದಿದ್ದು ನೋಡಿ ಖಾಸಗಿಯವರಿಗೆ ದಿಗಿಲಾಗಿತ್ತು, ಪ್ರಾಮಾಣಿಕವಾಗಿ‌ ಬಡ ಮಕ್ಕಳೊಡನೆ‌ ಬೆರೆತು ಕೆಲಸ ಮಾಡ್ತಿದ್ದ ಶಿಕ್ಷಕರನ್ನು ನೋಡಿ  ಕೆಲವು ಸೋಮಾರಿ/ಅಪ್ರಮಾಣಿಕ ಶಿಕ್ಷಕರಿಗೆ ಇದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂಬ ದುರಾಸೆ ಮೂಡಿತ್ತು ಇವರೆಲ್ಲಾರಿಗೂ ಕಂಡಿದ್ದು ಒಂದೇ ಕಾರಣ ಅದು "ಕರೋನಾ". ಇವರೆಲ್ಲಾ ಸೇರಿ‌ ಲಜ್ಜೆಗೆಟ್ಟ ಮಾಧ್ಯಮಗಳಿಗೆ ಫಂಡ್ ಮಾಡಿದ್ವು, ಸಂಜನಾ, ಕಂಗನಾ, ರಾಗಿಣಿ‌ ಹಿಂದೆ‌ ಬಿದ್ದಿದ್ದ ಇವರಿಗೆ ಆಗೆಲ್ಲಾ ಈ ವಿದ್ಯಾಗಮ‌ ಕಾಣಲೇ ಇರಲಿಲ್ಲ.  ವಿದ್ಯಾಗಮ ಕಾರ್ಯಕ್ರಮದ ಆಳ ಅಗಲ‌ದ‌ ಅರಿವೇ ಇಲ್ಲದ ಈ ಮಾನಗೆಟ್ಟ ಮಾದ್ಯಮಗಳು ಅದನ್ನೇ ದೊಡ್ಡದಾಗಿ ತೋರಿಸಿ‌ ಇಡೀ ಕಾರ್ಯಕ್ರಮವನ್ನೇ ನಿಲ್ಲಿಸಿದರು. ಬಡ ಮಕ್ಕಳಿಗೆ‌ ಮನೆಬಾಗಿಲಲ್ಲಿ ಸಿಗುತ್ತಿದ್ದ ಶಿಕ್ಷಣಕ್ಕೆ ಕಲ್ಲು ಹಾಕಿ ಅದು ನಮ್ಮಿಂದಲೇ ಅಂತ‌‌‌ ನಾಚಿಕೆ ಬಿಟ್ಟ‌ ಅಷ್ಟೂ ಮಾದ್ಯಮಗಳು ಪ್ರಚಾರ ಪಡೆದುಕೊಂಡವು‌. ವಿದ್ಯಾಗಮ‌ ಕಾರ್ಯಕ್ರಮ ನಿಲ್ಲೋದರಿಂದ ಶಿಕ್ಷಕರಿಗಾಗಲಿ, ರಾಜಕಾರಣಿಗಳಿಗಾಗಲಿ, ಮಾನಗೆಟ್ಟ ಮಾಧ್ಯಮಗಳ ‌ಪ್ರತಿನಿಧಿಗಳಿಗಾಗಲಿ‌ ಯಾವುದೇ ನಷ್ಟವಿಲ್ಲ. ಯಾಕೆಂದ್ರೆ ಅವರ ಮಕ್ಳಳೆಲ್ಲಾ ಖಾಸಗಿ ಶಾಲೆಗಳಲ್ಲಿ

ಅಪ್ಪಂದಿರ ಶ್ರಮಕ್ಕೆ ಬೆಲೆ ನೀಡೋಣ..

ಇಮೇಜ್
ಅಪ್ಪಂದಿರ ದಿನಾಚರಣೆಯ ಈ ಸಂದರ್ಭದಲ್ಲಿ  ಎಲ್ಲ ಅಪ್ಪಂದಿರ ಪೋಟೋಗಳು ವಾಟ್ಸಪ್ ನ ಸ್ಟೇಟಸ್ ನಲ್ಲಿ ರಾರಾಜಿಸುತ್ತಿವೆ. ಈ ಕಾರಣದಿಂದಾದರೂ ಪ್ರತಿಯೊಬ್ಬರು ಅಪ್ಪಂದಿರನ್ನು ನೆನಪಿಸಿಕೊಂಡಿರುವುದು ಸಂತೋಷಕರ‌ ಸಂಗತಿ.. ಯಾವಾಗಲೂ ಅಮ್ಮಂದಿರಿಗೆ ಹೆಚ್ಚಿನ ಮಹತ್ವ ಕೊಡ್ತೇವೆ ಆದರೆ ಅಪ್ಪಂದಿರ ಶ್ರಮ ಬೆಳಕಿಗೆ ಬರುವುದೇ ಇಲ್ಲ.. ನಾವು ಅಪ್ಪನ ಸ್ಥಾನಕ್ಕೆ ಬಂದಾಗಲೇ ಅಪ್ಪನ ಕಷ್ಟ ಏನು ಅಂತ ಅರ್ಥ ಆಗೋದು.. ನನಗೂ ನನ್ನಪ್ಪನ ಅರ್ಹತೆ ಪೂರ್ಣವಾಗಿ ಅರಿವಾಗಿದ್ದು ನಾನು ಅಪ್ಪನಾದ ಮೇಲೆಯೇ.. ಅವರನ್ನು ಸಂತೋಷವಾಗಿಡಬೇಕು ಅಂತ ಏನೇಲ್ಲ ಮಾಡಬಹುದೋ ಅದೆಲ್ಲವನ್ನೂ ಮಾಡಲು ನಾನು ತಯಾರಿದ್ದೆ, ಆದರೆ ಅಪ್ಪ ಅವ್ವನ ಮನಸ್ಸುಗಳೇ ಅಂತಹವೇನೋ ಅವರು ನಮ್ಮಿಂದ ಏನನ್ನೂ ಬಯಸುವುದೇ‌ ಇಲ್ಲ.. ನಾವು ಕೊಟ್ಟಷ್ಟೇ ಪ್ರೀತಿ, ತೋರಿದಷ್ಟೇ ಮಮತೆಯನ್ನೇ ಸಂತೃಪ್ತಿಯಿಂದ ಅಪ್ಪಿಕೊಳ್ಳುವ ಹಾಗು ನಾವು ಏನೇ ಮಾಡುದರು ನಮ್ಮನ್ನು ಒಪ್ಪಿಕೊಳ್ಳುವ ಮನೋಭಾವ ಅವರದು. ತನ್ನ ಊರು, ಮನೆ, ಹೊಲ ಗದ್ದೆಯೇ ಪ್ರಪಂಚ ಅಂತ ಅಂದುಕೊಂಡು ಬದುಕುತ್ತಿದ್ದ ನನ್ನ ಅಪ್ಪನಿಗೆ ಹೊರ ಜಗತ್ತಿನ ಆಧುನಿಕ, ಆಡಂಬರದ ಪರಿಚಯ ಮಾಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಟೀವಿಯಲ್ಲೇ ಎಲ್ಲವನ್ನು ನೋಡಿ ಆಶ್ಚರ್ಯಪಡುತ್ತಿದ್ದ ನಮ್ಮಪ್ಪನನ್ನು ಹಾಗೆ ನಮ್ಮ ನಮ್ಮಪ್ಪನ ಓರಗೆಯ ನಮ್ಮ ಚಿಕ್ಕಪ್ಪಂದಿರನ್ನು ಒಮ್ಮೆ ಪ್ರವಾಸಕ್ಕೆ ಕರೆದೊಯ್ದು ಬಹಳಷ್ಟು ಸ್ಥಳಗಳನ್ನು ತೋರಿಸಿ ಬಂದೆ. ಅವರ ಆಶ್ಚರ್ಯಚಕಿತ ಕಣ್ಣುಗಳಲ್ಲಿನ ಸಂತ

ದೇವಸ್ಥಾನದೊಳಗಿನ ಬಿಕ್ಷುಕರು..

ಮನುಷ್ಯನಿಗೆ ಜೀವನದಲ್ಲಿ ಬೇಸರವೆನಿಸಿದಾಗ ಅಥವಾ ಕಷ್ಟಗಳು ಬೆನ್ನತ್ತಿದಾಗ ಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ ದೇವಸ್ಥಾನಗಳ ಮೊರೆ ಹೋಗುವುದು ಸಾಮಾನ್ಯ. ಇಲ್ಲಿ ಆಸ್ತಿಕತೆ ಅಥವಾ ನಾಸ್ತಿಕತೆಯ ಪ್ರಶ್ನೆ ಬೇಡ ಆದರೆ ದೇವಸ್ಥಾನಗಳಿಗೆ ತೆರಳಿ ಏಕಾಂತದಲ್ಲಿ ಸುಮ್ಮನೆ ಸ್ವಲ್ಪ ಸಮಯ ಕಳೆದರೆ ನೊಂದ ಮನಸ್ಸಿಗ ಸಾಂತ್ವನ ಸಿಗುವುದು ನಿಜ. ಇದು ಭಕ್ತಿಯಿಂದಲೂ ಇರಬಹುದು , ದೇವರ ಪವಾಡವೂ ಇರಬಹುದು ಅಥವಾ ದೇವಸ್ಥಾನದ ಪರಿಸರದಲ್ಲಿನ ವೈಜ್ಞಾನಿಕ ಕಾರಣಗಳಿಂದಾಗಿಯೂ ಇರಬಹುದು. ಹೇಗೆ   ಎಂಬ ಪ್ರಶ್ನೆ ಗಿಂತ ಕೊಂಚವಾದರು ನೆಮ್ಮದಿ ದೊರಕಿತೆ ಎಂಬುದು ಮುಖ್ಯ. ಇಂಥ ಕಾರಣಕ್ಕಾಗಿಯೇ ಹಲವಾರು ಜನ ದೇವಸ್ಥಾನಗಳಿಗೆ ಬರುತ್ತಾರೆ. ಆದರೆ ದೇವಸ್ಥಾನದ ಪರಿಸರ ನೆಮ್ಮದಿ ಅರಸಿ ಬರುವವರ ತಾಳ್ಮೆಗೆಡಿಸುವಂತೆ ಇದ್ದರೆ ಅದರ ಪರಿಣಮ ಏನಾಗಬಹುದು ಎಂಬುದನ್ನು ಯೋಚಿಸಿ. ನಾನು ದೇವರ ವಿರೋಧಿಯಲ್ಲ , ದೇವ ಬಗೆಗೆ ಒಂದು ಹಂತದ ಭಕ್ತಿ ನನಗೂ ಇದೆ ಹಾಗು ಮನಸ್ಸಿಗೆ ಶಾಂತಿ ಬಯಸಿ ದೇವಸ್ಥಾನಗಳಿಗೆ ಹೋಗುವ ಅನೇಕಾನೇಕರಲ್ಲಿ ನಾನೂ ಸಹ ಒಬ್ಬ.   ಆದರೆ ಇಂದಿನ ದೇವಸ್ಥಾನಗಳು ಶಾಂತಿ ನೆಮ್ಮದಿ ಬಯಸಿ ಬರುವ ಭಕ್ತಾದಿಗಳಿಗೆ ಪೂರಕವಾಗಿ ಇವೆಯೇ ಎಂಬುದು ನಾವು ಯೋಚಿಸಬೇಕಾದ ವಿಷಯ. ಹಲವು ದೇವಸ್ಥಾನಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ಉಳಿದಿಲ್ಲ ಹಾಗು ಇವುಗಳು ವಾಣಿಜ್ಯ ಹಾಗು ವ್ಯವಹಾರಿಕ ಸ್ಥಳಗಳಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಭಕ್ತಾದಿಗಳಿಂದ ಹಣ ಪೀಕುವುದರಲ್ಲೇ ನಿ

ನನ್ನವಳು ನನ್ನೊಲವಿನ ಬೆಳಕಿವಳು..!

ಇಮೇಜ್
ನನ್ನ ಮನೆ ಹಾಗು ಮನಕ್ಕೆ ಹೊಸ ಅತಿಥಿಯೊಬ್ಬರನ್ನು ನೀಡಲು ಕಾದಿರುವ ನನ್ನವಳಿಗಾಗಿ ಈ ಪದಪುಂಜಗಳ ಕಾಣಿಕೆ... ನಗುಮೊಗದಿ ಬಂದು ನೆಮ್ಮದಿಯ ತಂದವಳು ಕಣ್ಣೊರೆಸಿ ಕೈಹಿಡಿದು ಸಂತೈಸಿದವಳು ಮಡಿಲಲ್ಲಿ ಮಗುವಂತೆ ಮುದ್ದಿಸಿದವಳು ಹುಸಿಕೋಪದಲ್ಲೇ ಬೊಗಸೆ ಬೊಗಸೆ ಪ್ರೀತಿ ನೀಡಿದವಳು ನನ್ನವಳು ನನ್ನ ಮಮತೆಯ ಕಣ್ಣಿವಳು..! ನನ್ನೊಳಗೆ ತನ್ನವರನ್ನೆಲ್ಲಾ ಕಂಡುಕೊಂಡವಳು ನನಗಾಗಿ ತನ್ನತನವ ಕಳೆದುಕೊಂಡವಳು ನನ್ನ  ನಗುವಲ್ಲೀ ತನ್ನ ನೋವ ಮರೆತವಳು ನನ್ನವಳು  ನನ್ನೊಲವಿನ ಬೆಳಕಿವಳು..! ಬದುಕಿಗೆ ಭರವಸೆಯ ಬೆಳಕು ತಂದವಳು ಮಧುರ ಭಾಂಧವ್ಯಕ್ಕೆ ಅರ್ಥ ನೀಡಿದವಳು ಕಂಕಣದ ಬಳೆಗಳ ಸದ್ದಿನೊಂದಿಗೆ ಬಂದವಳು ಮನದ ಕತ್ತಲೆಯನ್ನು ಹೊಸ್ತಿಲಮೇಲಿನ ಅಕ್ಕಿಬೆಲ್ಲದೊಡನೆ ಒದ್ದು ಪ್ರೀತಿಯ ಬೆಳಕು ಮೂಡಿಸಿದವಳು ನನ್ನವಳು ನನ್ನೊಳಗೆ ಬೆರೆತ ಉಸಿರಿವಳು..! ಅತ್ತೆ ಮಾವರಲ್ಲ ಅಪ್ಪ ಅಮ್ಮ ಎಂದವಳು ನನ್ನವರನ್ನೆಲ್ಲಾ ತನ್ನವರೆಂದುಕೊಂಡವಳು ನನ್ನ ಇಷ್ಟ ಕಷ್ಟಗಳ ಗ್ರಹಿಸಿಕೊಂಡವಳು ಬಂದ ನೋವುಗಳ ಸಹಿಸಿಕೊಂಡವಳು ನನ್ನವಳು ನನ್ನ ಜೀವನದ ಸಾರಥಿಯಿವಳು..! ಗೆಲುವೇ ಜೀವನ ಎಂದವನಿಗೆ ಒಲವೇ ಜೀವನ ಎಂದು ತೋರಿಸಿದವಳು ಬದುಕಿಗೊಂದು ಸಾರ್ಥಕತೆ ಮೂಡಿಸಿದವಳು ನನ್ನ ಪ್ರೀತಿಯ ತನ್ನೊಡಲಲ್ಲಿ ಬಚ್ವಿಟ್ಟು, ನನ್ನ ಮನೆಗೆ ಹೊಸ ಮುದ್ದು ಅತಿಥಿಯ ನೀಡಲು ಕಾದಿರುವವಳು ನನ್ನವಳು ನನ್ನೆದೆಯ ಮಿಡಿತ ಇವಳು..! -ಕನ್ನಡವೆಂಕಿ 21.11.2017

ಮೊದಲನೇ ವಾರ್ಷಿಕೋತ್ಸವದ ದಿನ ನನ್ನವಳಿಗಾಗಿ ಬರೆದ ಸಾಲುಗಳು...

ಇಮೇಜ್
ಇಳಿ ಸಂಜೆಯ ತಿಳಿ ಬೆಳಕಲಿ ನಿನ್ನ  ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯು ಪ್ರಾಸ ಮರೆತ ಪದ ಪುಂಜದಲ್ಲಿ ನಿನ್ನ ತುಟಿ ಅಂಚಿನ ಮೌನವೇ ಕವಿತೆಯು ಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣ ಹುಡುಕುತಲಿ ಅಲೆಯುತಿದ್ದಾಗ ಬಂದವಳು ನೀನು ಜಗವೆಲ್ಲ  ಬರಡಾಗಿ ನನ್ನೊಳಗೆ ನೀನಿರೆ ಅನುದಿನ ಅಷ್ಟೇ ಸಾಕು ಎನ್ನುವೆನು ನಾನು ನಿನಗೆಂದೆ ಬರೆದ ಈ ಸಾಲನು ನಿನ್ನ ಕಿವಿ ಅಂಚೆಯಲಿ ಹಾಕುತಲಿರುವೆ ಲೋಕವೆಲ್ಲ ಕಿವುಡಾಗಿ ನಿನಗೊಬ್ಬಳಿಗೆ ಕೇಳಬೇಕಿದೆ ಮನದ ಈ ಮಾತು.. ಜೊತೆಯಿರಲಿ ಎಂದೆಂದೂ ನಿನ್ನ ಸಾರಥ್ಯ ಮರೆಸುವುದೆನಗೆ ಎಲ್ಲ ನೋವ ನಿನ್ನ ಸಾಂಗತ್ಯ ಕ್ಷಣದಲ್ಲೇ ಕಳೆದೊಯ್ತು ಒಂದು ವರುಷ ನಿನ್ನ ಮಡಿಲು ನೀಡಿದೆ ಮೈಮರೆವ ಹರುಷ ಈ ಜೀವ ಜೀವನಕೆ ಸದಾ ಹಸಿರಾಗಿರು ಸದಾ ನನ್ನ ಉಸಿರಾಗಿರು..  ಮೊದಲನೇ ವರ್ಷದ ಶುಭಾಶಯಗಳು ನನ್ನೊಲವೆ..

ಅಚ್ಚೇ ದಿನಾ ಅಂದ್ರೆ ಏನು ಶಿವಾ....?

ನಾವು ಇಸ್ಕೂಲ್‌ ಲಿ ಓದೋವಾಗ ನಮ್ಮ ಹಿಂದಿ ಮೇಷ್ಟ್ರು "ಅಚ್ಚೇ ದಿನ್‌" ಅಂದ್ರೆ ಒಳ್ಳೆಯ ದಿನಗಳು ಅಂತ ಹೇಳಿಕೊಟ್ಟಿದ್ರು.ನಾವು ಅದನ್ನೇ ಕಲ್ತ್ಕೊಂಡು ಒಳ್ಳೆ ದಿನಗಳು ಬರ್ತವೆ ಅಂತಕಾಯ್ತಿದ್ವಿ ಆದ್ರೆ ಈಗ ನೋಡುದ್ರೆ ಅಚ್ಚೇ ದಿನ ಅನ್ನೋದಕ್ಕೆ ಅರ್ಥಾನೆ ಬದಲಾಗಿ ಹೋಗಿದೆ ! ಅಚ್ಚೇದಿನ ಅಂದ್ರೆ "ದುಬಾರಿ ದಿನ" ಅಂತ ಅರ್ಥ ಮಾಡ್ಕೋಬೇಕಿದೆ. ಹೆಂಗೆ ಅಂತೀರಾ ಇಲ್ಲೋಡಿ, ಎರಡು ವರ್ಷದ ಹಿಂದೆ ಒಬ್ಬ ನಾ ಅಚ್ಚೇ ದಿನಗಳನ್ನು ತರ್ತೀನಿ ಅಂತ ಬೊಂಬಡ ಹೊಡ್ಕೊಂಡು ಬಂದ. ನಾವುಗಳು ಸಹ ಇನ್ಮೇಕೆ ಒಳ್ಳೇ ದಿನಗಳು ಬರ್ಬೋದು ಶಿವಾ ಅಂತ ಕಣ್ಣು ಕಿವಿ ಬುಟ್ಕೊಂಡು ಕಾಯ್ತಾ ಕುಂತಿದ್ವಿ. ಅಚ್ಚೇ ದಿನಗಳು ಇನ್ನೇನು ಬರಬಹುದು, ಈಗ ಬರಬಹುದು, ಆಗ ಬರಬಹುದು ಅಂತ ಕಾಯ್ತಾ ಕುಂತಿರೋವಾಗಲೇ ಕತ್ತು ಎತ್ತಿ ನೋಡುದ್ರೆ ಈ ಅಸಾಮಿ ದೇಶ ಸುತ್ತೋಕೆ ನಮ್ಮ ತಲೇ ಮೇಲೆ ಇಮಾನ ಬುಟ್ಕೊಂಡು ಹೊಂಟುಬುಡೋದಾ.. ಹೋಗ್ಲಿ ದೇಶಗಳನ್ನೆಲ್ಲಾ ಸುತ್ಕೊಂಡು ನಮ್ಮ ದೇಶಕ್ಕೆ ಒಳ್ಳೆದಾಗೋ ಹಾಗೇ ಏನೋ ಮಾಡ್ಕೊಂಡು ಬರಲಿ ಅಂತ ಕಾಯೋರು ನಾವು ಕಾಯ್ತಾನೆ ಕುಂತಿದ್ವಿ. ದೇಶಕ್ಕೆ ವಾಪಸ್ಸು ಬರೋವಾಗ ಈವಪ್ಪಾ ತರೋ ಕಪ್ಪು ಹಣದಲ್ಲಿ ನಮಗೂ ಒಂದಿಷ್ಟು ಪಾಲು ಬತ್ತದೇ ಅಂತ ಮಡಕೆ ಒಳಗೆ ಮಡಿಚಿ ಇಟ್ಟಿದ್ದ ದುಡ್ಡನ್ನೆಲ್ಲಾ ತೆಗೆದು ಆಧಾರ್ ಕಾರ್ಡು, ಹಸ್ರು ಕಾರ್ಡು ತಗೋಂಡು ಬ್ಯಾಂಕ್‌ ಗೆ ಹೋಗಿ ನಮ್ಮದೂ ಒಂದು ಅಕೌಂಟ್‌ ಮಾಡ್ಸಿ ಪಾಸ್‌ಬುಕ್ ತಂದು ಅದೇ ಮಡಕೆ ಒಳಗೆ ಬಚ್ಚಿಟ್ವಿ. ಅಕೌಂಟ

ಪ್ರೀತಿಗೆ ಮತ್ತೊಂದು ಹೆಸರೇ ಕಾಳಜಿ ಅಲ್ವಾ ....?

ಇಮೇಜ್
ಎಲ್ಲೆಡೆ ಈದಿನ ಪ್ರೇಮಿಗಳ ದಿನದ ಸಂಭ್ರಮ, ಕೆಂಪುಗುಲಾಬಿಗೆ ಎಂದೂ ಕಾಣದ ಬೇಡಿಕೆ. ಪ್ರೇಮ ನಿವೇದನೆಗಾಗಿ ಕೊಟ್ಟ ಗುಲಾಬಿ ಬಾಡುವಷ್ಟರಲ್ಲೇ ಒಡೆದು ಹೋಗುವ ಅದೆಷ್ಟೋ ಹೃದಯಗಳು..... ಪ್ರೇಮಿಗಳ ದಿನ ನಮ್ಮ ಸಂಸ್ಕೃತಿಗೆ ವಿರುದ್ದವಾದುದು ಎಂದು ವಿರೋಧಿಸುವ ಕೆಲವು ಸಂಘಟನೆಗಳು.. ಹೀಗೆ ಪ್ರತೀ ವರ್ಷ ಈ ದಿನ ಬರುತ್ತೆ ಹೋಗುತ್ತೇ, ಆದರೆ ಈ ಪ್ರೇಮಿಗಳ ದಿನ ಕೇವಲ ಹದಿಹರೆಯದ ಹುಡುಗ ಹುಡಿಗಿಯ ನಡುವಿಗೆ ಪ್ರೇಮಕ್ಕೇ ಮಾತ್ರವೇ ಸೀಮಿತವೇ..? ಹುಡುಗ ಹುಡುಗಿ ಕೈ ಕೈ ಹಿಡಿದು ಪಾರ್ಕ್, ಸಿನಿಮಾ, ಹೋಟೆಲ್ ಸುತ್ತಿದೋ ಒಂದು ಸಂಭ್ರಮವೇ ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಪ್ರೀತಿಗೆ ಯಾವುದೇ ಬೇಲಿಯಿಲ್ಲ, ಅದು ಯಾರಲ್ಲಿ ಬೇಕಾದರೂ ಇರಬಹುದು, ಹುಡುಗ ಹುಡುಗಿ ಮಾತ್ರವಲ್ಲ, ಅಪ್ಪ-ಮಗಳು, ಅಮ್ಮ-ಮಗ, ಅಕ್ಕ -ತಮ್ಮ, ಅಣ್ಣ-ತಂಗಿ, ಸ್ನೇಹಿತರು, ಗುರುಗಳು ಇತ್ಯಾದಿ... ಇವುಗಳಲೆಲ್ಲಾ ನಾವು ಪ್ರೀತಿ ಹುಡುಕಬೇಕಿದೆ... "ಇಡೀ ಜಗತ್ತಿನಲ್ಲಿಯೇ ನನ್ನ ಮಗನೇ ನನ್ನ ಸರ್ವಸ್ವ" ಎನ್ನುವ ಅಮ್ಮನದು ಪ್ರೀತಿ. "ಜವಾಬ್ದಾರಿಯಿಂದ ಬದುಕುವುದನ್ನು ಕಲಿ, ಸರಿಯಾದವರ ಸಹವಾಸ ಮಾಡು" ಎಂದು ಸದಾ ಗದರುವ ಅಪ್ಪನ ಕಾಳಜಿಯೇ ಪ್ರೀತಿ. "ನಿನಗೇ ಅಂತ ಒಂದು ಹುಡುಗಿ ನೋಡಿದೀನಿ ಕಣೋ, ಇದಕ್ಕಿಂತ ಚಂದ ಇರೋ ಹುಡುಗಿ ಸಿಗಲ್ಲಾ ನೋಡೋ" ಅನ್ನೋ ಅಕ್ಕನದು ಪ್ರೀತಿ. "ಯಾಕೋ ಒದ್ದಾಡ್ತಿಯಾ ಒಬ್ಬನೇ, ನಾನಿಲ್ಲವಾ ನೋಡ್ಕೋತೀನಿ ಬಿಡು"

ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ

ಇಮೇಜ್
ದಿನಾಂಕ 20.01.2017 ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ಲೇಖನ.

ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು

ಇಮೇಜ್
   ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು (ನೇಸರ ಉದಯೋನ್ಮುಖ ಬರಹಗಾರರ ವೇದಿಕೆ, ಬೆಂಗಳೂರು ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಲೇಖನ) ಅದೊಂದು ಕಾಲದಲ್ಲಿ , ಹಬ್ಬವೆಂದರೆ ಇಡೀ ಊರಿಗೆ ಊರೇ ಸಂಭ್ರಮದಿಂದ ಸಜ್ಜುಗೊಳ್ಳುತ್ತಿತ್ತು , ಹಬ್ಬದಿ ಹಿಂದಿನ ದಿನದಿಂದ ಹಬ್ಬ ಮುಗಿದ ಮೂರು ದಿನಗಳ ತನಕವೂ ಅದೇ ಸಂಭ್ರಮದಲ್ಲಿ ಜನರು ತಮ್ಮ ಎಲ್ಲಾ ನೋವು ಕಷ್ಟ ಕಾರ್ಪಣ್ಯಗಳನ್ನು ಮರೆತುಬಿಡುತ್ತಿದ್ದರು . ಮನೆಯ ಮೂಲೆ ಮೂಲೆಯ ಕಸ ಕೊಳೆ ತೆಗೆದು ತೋರಣ - ತಳಿರುಗಳಿಂದ ಶೃಂಗಾರಗೊಳ್ಳುತ್ತಿದ್ದವು , ಇಲ್ಲಿ ಯಾವುದೇ ತೋರಿಕೆ ಇರುತ್ತಿರಲಿಲ್ಲ ಮತ್ತು ಆಡಂ ಭ ರವೂ ಇರುತ್ತಿರಲಿಲ್ಲ . ತಮ್ಮ ಬಳಿ ಇರುವ ವಸ್ತುಗಳೇ ಸಾಕಾಗುತ್ತಿದ್ದವು . ಅದಕ್ಕಿಂತ ಹೆಚ್ಚಾಗಿ ವರ್ಷದ ಕೆಲವು ಹಬ್ಬಗಳನ್ನು ಮಾತ್ರವೇ ಈ ರೀತಿ ವಿಜೃಂಭಣೆಯಿಂದ ಮಾಡಲಾಗುತಿತ್ತು . ನಾವೆಲ್ಲಾ ಚಿಕ್ಕವರಿದ್ದಾಗ ಹಬ್ಬದ ದಿನ ನಮ್ಮಗಳ ಅಪ್ಪಂದಿರು ಪೇಟೆಗೆ ಹೋಗಿ ಮದ್ಯ್ಹಾನದ ವೇಳೆ ಹಬ್ಬದ ಸಾಮಾನು ತರುತ್ತಿದ್ರು , ನಾವೆಲ್ಲಾ ಅವರ ಬರುವಿಕೆಯನ್ನೇ ಎದುರು ನೋಡುತ್ತಾ ಏನೇನು ತರಬಹುದು , ಯಾವ ಬಣ್ಣದ ಬಟ್ಟೆ ತರಬಹುದು , ಬಲೂನು ಪೀಪಿ ತರಬಹುದಾ ಎಂಬ ಕುತೂಹಲದಿಂದ ಕಾಯುತ್ತಿದ್ದೇವು . ಆ ಕುತೂಹಲದಲ್ಲಿದ್ದ ಖುಷಿ ಸಮಾನವಾದುದು ಯಾವುದೂ ಇಲ್ಲ . ಈಗ ಏನಾಗಿದೆ , ತಿಂಗಳಿಗೆ ಎರಡು ಹಬ್ಬಗಳು ಸಂಕಷ್ಟಿ , ಏಕಾದಶಿ , ಚತುರ್ಥಿ , ಗೌರಿ ವ್ರತ , ಲಕ್ಷ್ಮೀಪೂಜೆ ಹೀಗೆ .